Admission Inquiry 2023-24
A Journey To A Better Future Begins With Us
ಮನಸುಗಳನ್ನು ರೂಪಿಸುವುದು, ಜೀವಗಳ ಮನಮುಟ್ಟುವುದು, ಎರಡನೇ ಮನೆಯನ್ನಾಗಿ ರೂಪಿಸುವುದರಲ್ಲಿ” ನಾವು ನಂಬಿಕೆ ಇರಿಸಿದ್ದೇವೆ. 18 ವರ್ಷಗಳ ಹಿಂದೆ ಮೊದಲ ಆರ್ಚಿಡ್ಸ್ ಮೊಗ್ಗು ಹೈದರಾಬಾದ್‌ನಲ್ಲಿ ಮೂಡಿತ್ತು. ಈಗ 36 ಅಂತಾರಾಷ್ಟ್ರೀಯ ಶಾಲೆಗಳಿದ್ದು, 30000 ಕ್ಕೂ ಹೆಚ್ಚು ಜೀವಗಳನ್ನು ಸುಧಾರಿಸಿದ್ದೇವೆ. ಪ್ರತಿ ಶೈಕ್ಷಣಿಕ ವರ್ಷದಲ್ಲೂ ಹೊಸ ಹೊಸ ಮಾನದಂಡಗಳನ್ನು ನಾವು ನಿಗದಿಸುತ್ತಿದ್ದು, ಬೆಂಗಳೂರು, ಮುಂಬೈ, ಪುಣೆ, ಕೋಲ್ಕತಾ, ಹೈದರಾಬಾದ್ ಮತ್ತು ಚೆನ್ನೈನಲ್ಲಿ ಗುಣಮಟ್ಟದ ಶಿಕ್ಷಣಕ್ಕಾಗಿ ಪ್ರಮುಖ ಅಂತಾರಾಷ್ಟ್ರೀಯ ಶಾಲೆಗಳಲ್ಲಿ ನಾವೂ ಒಂದಾಗಿದ್ದೇವೆ.
ಈ ಸಾಂಕ್ರಾಮಿಕ ರೋಗವು ಇಡೀ ವಿಶ್ವವನ್ನೇ ಸ್ಥಗಿತಗೊಳಿಸಿದೆ. ಆದರೆ ಆರ್ಚಿಡ್ಸ್‌ನಲ್ಲಿ ಕಲಿಕೆ ನಿಂತಿಲ್ಲ. ನಮ್ಮ ಅತ್ಯಂತ ಅರ್ಹ ಸಿಬ್ಬಂದಿಯು “ಏನೇ ಆದರೂ ಕೆಲಸ ನಡೆಯುತ್ತಿರಬೇಕು” ಎಂಬ ಮನಸ್ಥಿತಿಯನ್ನು ಹೊಂದಿದ್ದು, ನಮ್ಮ ಸ್ಕ್ರೀನ್ ಒಳಗೆ ಕ್ಲಾಸ್‌ರೂಮ್ ಅನ್ನು ಅಳವಡಿಸುವುದನ್ನು ಸಾಧ್ಯವಾಗಿಸಿದ್ದಾರೆ. ಕಲಿಕೆಯನ್ನು ನಿರಂತರವಾಗಿ ನಡೆಸುವುದಕ್ಕಾಗಿ ದುಪ್ಪಟ್ಟು ಉತ್ಸಾಹದಿಂದ ಅವರು ಶ್ರಮಿಸಿದ್ದು, ಒಂದು ತರಗತಿಯೂ ಆರ್ಚಿಡ್ಸ್‌ನಲ್ಲಿ ತಪ್ಪಿಲ್ಲ. ನಮ್ಮ ಸಿಬ್ಬಂದಿಯು ನಿರಂತರವಾಗಿ ಹೊಸ ತಂತ್ರಗಳನ್ನು ಪರಿಚಯಿಸುವಲ್ಲಿ ತೊಡಗಿಸಿಕೊಂಡಿರುತ್ತದೆ ಮತ್ತು ಕಲಿಕೆಯನ್ನು ಮೋಜಿನ ಹಾಗೂ ಖುಷಿಯಾಗಿಸುವಲ್ಲಿ ಕ್ರಿಯಾಶೀಲ ವಿಧಾನಗಳನ್ನು ಬಳಸುತ್ತಿದೆ.